Monday, September 10, 2012

ದೂ ದ ಉವಾಚ

ದೂರದರ್ಶನ ಉವಾಚ

ದೂರದನು ತೋರುವೆನು ದೂರದೆ ಕಾಣಣ್ಣ,
ಒಳಿತುಕೆಡುಕನು ಅರಿಯೆ ತಿಳಿದು ನೀ ನೋಡಣ್ಣ.

ದೂರಸ್ಥಂ ದರ್ಶಯಾಮೀಹ ಯೋಗ್ಯಾಯೋಗ್ಯಮಚಿಂತಿತಮ್ |
ಮುಖಂ ಮಮ ಸರ್ವಾಕರ್ಷಂ ಸ್ತೂಯತೇ ದೂರದರ್ಶನಮ್ ||

ಅನಂತ ವಿಶ್ವದಲ್ಲೆಲ್ಲೋ ಅವ್ಯಕ್ತವಾಗಿದ್ದ ನನ್ನಾತ್ಮವನ್ನು ಸಾಕಾರಗೊಳಿಸಿದ್ದು ಪಶ್ಚಿಮದೇಶದ ಜಾನ್ ಬೇರ್‍ಡ ಎಂಬ ವಿeನಿ. ಹೊಸದಾಗಿ ಆವಿಷ್ಕೃತಗೊಂಡ  ನಾನು ಆರಂಭದಲ್ಲಿ ಅಷ್ಟೊಂದು ಚತುರಮತಿಯಾಗಿರಲ್ಲಿ. ಕೇವಲ ಧ್ವನಿಯೊಂದನ್ನು ದೂರದಿಂದ ಕಳಿಸಿ ಕೇಳಿಸುತ್ತಿದ್ದ ನನ್ನ ಅಣ್ಣ ಆಕಾಶವಾಣಿ ಎನಿಸಿಕೊಂಡವ ಸಾರ್ವಭೌಮನಾಗಿ ಮೆರೆಯುತ್ತಿದ್ದಕಾಲದಲ್ಲಿ ನಾನು ಈ ಜಂಭೂದ್ವೀಪದ ಭರತಖಂಡದಲ್ಲಿ ೧೯೫೯ ರಲ್ಲಿ ಅಡಿಯಿಡಿಸಿದೆ. ವೈದೇಶೀಯ ವಿಷಯಗಳನ್ನೇ ಗೌರವಸುವ ಭಾರತೀಯರ ಮನಸ್ಸನ್ನು ಮುಟ್ಟುಗೋಲುಹಾಕುವಲ್ಲಿ ಅಂದಿನಿಂದ ಇಂದಿನವರಗೆ ಸಾಕಷ್ಟು ಯಶಸ್ವಿಯಾಗಿದ್ದೇನೆ. ಅಂದುಪೂರ್ಣಪ್ರಮಾಣದಲ್ಲಿ ಪಾಶ್ಚಾತ್ಯ ತನುಮನಗಳನ್ನು ಹೊಂದಿ ಇಲ್ಲಿಗೆ ಬಂದಿದ್ದರೂ ಇಂದು ನನ್ನೆಲ್ಲಾ ಅಂಗಾಂಗಗಳೂ ಈ ಹಿಂದುಸ್ಥಾನದಲ್ಲಿಯೇ ಸಿದ್ಧವಾಗಿ ಆಕಾರವಿಕಾರಗಳನ್ನು ಹೋದುತ್ತಿದ್ದೇನೆ. ಒಂದುಕಾಲದಲದಲಿ ಸಿರಿವಂತರ ಭೋಗದ ವಸ್ತುವೆನೆಸಿದ್ದ ನಾನು ಇಂದು ಪಾರ್ಥೇನಿಯಂ ಕಳೆಯನ್ನೂ ಮೀರಿಸಿ ಅರ್ಧಮನೆಯೀದ ಅರಮನೆಯವರೆಗೂ ವ್ಯಾಪಿಸಿದ್ದೇನೆ. ಹಳ್ಳಿಯ ಜೋಪಡಿಯಲ್ಲಿಯೂ ನನ್ನ ದರ್ಶನ ನಿಮಗೆ ಸಾಧ್ಯ. ಹಳ್ಲಿಯಲ್ಲಿಮೈಮುರಿದು ದುಡಿದು ದಣಿವ ರೈತನ ಮನಸಿಗೆ ಮುದನೀಡುವ  ಅತನ ಮಡದಿಗಿಂತಲೂ ನಾನೇ ಒಂದು ಕೈಮೇಲೆನಿಸಿಕೊಂಡಿದ್ದೇನೆ. ನಿರಂತರವಾಗಿ ಪರಿಶ್ರಮಿಸಿ ಕಾಯಕವೇಕೈಲಾಸ ಎಂದುಕೊಂಡಿರುವ ಹೈದರ ಕಾರ್ಯಗತಿಯನ್ನೇ ಬದಲಾಯಿಸಿದ್ದೇನೆ ಇಂದು ಹಳ್ಳಿಯ ಹೆಂಗೆಳೆಯರಲ್ಲ ಮನವಾರ್ತೆಯನ್ನು ಅರೆಬರೆ ಮಾಡಿನಡುದಿನದಲದಲ್ಲಿಯೂ ನನ್ನ ಮುಖದರ್ಶನ ಮಾಡುತ್ತಿದ್ದಾರೆ. ಇಷ್ಟುಸಾಲದೇ ಈ ದೇಶದ ಪ್ರಗತಿಗೆ?! ತವರನ್ನು ತೋರೆದ ಬಂದ ನನಗೆ ಅತ್ತೆಯಮನೆಯ ಉದ್ದಾರದ ಹಂಗಿಲ್ಲ. ಸಾಗರೋತ್ತರರು ನನನ್ನು ನಿರ್ಮಿಸಿದ್ದೇ ಈ ದೇಶ   ಸ್ವಾಂತಂತ್ರ್ಯ ಹೊಂದಿದರೂ ಗುಲಾಮಗಿರಿಯನ್ನು ತೊರೆಯದಿರಲೆಂದೇ. ಈ ದೃಷ್ಠಿಯಲ್ಲಿ ನಾನು ಸಂಪೂರ್ಣಯಶಸ್ವಿಯಾಗಿದ್ದೇನೆ. ಇನ್ನು ಓದುವ ಮಕ್ಕಳ ಪಾಡೋ ಹೇಳತೀರದು. ಕಿವಿಯಲ್ಲಿ ಗಾಳಿಸಿಕ್ಕಿದ ಎಳೆಗರುವಿಂತೆ ದಿಕ್ಕು ತಪ್ಪಿದವರಾಗಿದ್ದಾರೆ. ನಾನು ನೀಡುವ ವಿವಿಧ ಮನೋಮಾಲಿನ್ಯಕರ ಕಾರ್ಯಕ್ರಮಗಳನ್ನು ವೀಕ್ಷಿಸಿ ಓದುವದನ್ನು ಮರೆತಿದ್ದಾರೆ. ಕಾಟಾಚಾರದ ಓದನ್ನೂ ಇಷ್ಟದ ಊಟವನ್ನೂ ನನ್ನ ಎದುರಿನಲ್ಲಿಯೇ. ತವರಿನ ಬಳುವಳಿಯಾಗಿ ಈ ದೇಶದ ಸಂಸ್ಕೃತಿಯನ್ನು ಕೆಡಿಸುವ ವಾಹಿನಿಗಳನ್ನು ಪಡೆದಿದ್ದೇನೆ. ಆಕಾಶದಲ್ಲಿ ಸುತ್ತುತ್ತಿರುವ ಉಪಗೃಹವೆಂಬ ನನ್ನ ಚಿಕ್ಕಪ್ಪ, ನನ್ನ ಮುಖದಲ್ಲಿ ಮಿಂಚಬಲ್ಲಿರಂಗು ರಂಗೋಲಿಗಳನ್ನೆಲ್ಲಾ ತವರಿನಿಂದ ನನಗೆ ಕಳುಹಿಸುವ ದಲ್ಲಾಳಿ.  ಈ ದೇಶದ ಪ್ರಜೆಗಳೋ ತಾತ್ಕಾಲಿಕ ಸುಖಭೋಗಕ್ಕಾಗಿ ಎಲ್ಲವನ್ನು ಮರೆಯುವ ಮಹಾನುಭಾವರು !    ಔದ್ಯೋಗಿಕ ಕ್ಷೇತ್ರದಲ್ಲಿ ನನ್ನ ಕಾಲುಕೀಲುಗಳ ತಯಾರಿಕೆಯಲ್ಲಿ ಕ್ರಾಂತಿಯಾಗಿದೆ. ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದೇನೆ. ಆದರೆ ಈ ಸ್ಪರ್ಧೆಯಲ್ಲಿ ದಿನದಿಂದ ನನ್ನ ಮಾರಾಟದ ಬೆಲೆ ಇಳಿಯುತ್ತಿದೆ. ಕಾಸಿಗೊಂದು ಕೊಸರಿಗೊಂದು ಸಿಗುವ ಕಾಲಬಂದೀತೇನೋ ಎಂದು ಭಯವಾಗುತ್ತಿದೆ.

         ಅದರೂ ನಾನು ಇಲ್ಲಿಯ ಜನತೆಗೆ ಒಳ್ಳೆಯದನ್ನೂ ನೀಡುತ್ತಿದ್ದೇನೆ. ಮಕ್ಕಳಿಗೆ ಓದಲು ಅನುಕೂಲಕ್ರ ಪರಿಕರಗಳನ್ನು ತೋರಿಸುತ್ತೇನೆ. ದೇಶವಿದೀಶಗಳ ವರ್ತಮಾನಗಳನ್ನು ಕೇಳಿಸಿ ತೋರಿಸುತ್ತೇನೆ. ಗೃಹಿಣಿಯರಿಗೆ ಗೃಹೋಪಕರಣಗಳ ಉಪಯೋಗಗಳ ವಿವರ ನೀಡುತ್ತೇನೆ. ವಿeನ ತಂತ್ರeನಗಳ ವಿತರಣೆ ಮಾಡುತ್ತೇನೆ.ಇತಿಹಾಸ ಪುರಾಣಗಳ ಮೆಲುಕು ಹಾಕಿಸುತ್ತೇನೆ.ಇಲ್ಲಿಯ ಸಂಸ್ಕೃತಿಯ ಪುನರುಜ್ಜೀವನ್ನಕ್ಕೆ ಸಹಕರಿಸುತ್ತೇನೆ. ಆದರು ಇಲ್ಲಿಯ ಜನ ಇದನ್ನು ಸ್ವೀಕರಿಸದೆ ಬೇಡಾದುದನ್ನೇ ಹೆಚ್ಚು ಬಯಸುತ್ತಾರೆ. ಹಿತಕರ ಕಾರ್ಯಕ್ರಮಗಳನ್ನು ಬಿಟ್ಟು ಇತರ ವಾಹಿನಿಗಳ ಮಸಾಲೆ ಮನರಂಜನೆಯನ್ನೇ ದಿನವಿಡೀ ಆಸ್ವಾದಿಸುತ್ತಾರೆ. ಹದಿಹರಯದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಪ್ರೇಮ ಕಾಮದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದ ವಯಸ್ಸಿನಲ್ಲಿ ನಾನು ನೀಡಿದ್ದೇ ಸರ್ವಸತ್ಯ ಎಂಬ ಭ್ರಮೆಯಲ್ಲಿ ಜೀವನ ಲಕ್ಷ್ಯತಪ್ಪುವಲ್ಲಿ ಗುರಿಮುಟ್ಟಿದ್ದಾರೆ.

               ನಾನೊಂದು ಸಾಗರದಂತೆ ಬೆಲೆಬಾಳುವ ಮುತ್ತುರತ್ನಗಳನ್ನೂ ಹೊಂದಿದ್ದೇನೆ. ಅಪಾಯಕಾರೀ ಅಷ್ಟಪಾದಿಗಳನ್ನೂ ತಿಮಿಂಗಲಗಳನ್ನೂ ಪಡೆದಿರುತ್ತೇನೆ. ಹಂಸಕ್ಷೀರ ನ್ಯಾಯದಂತೆ ವ್ಯವಹರಿಸಿದರೆ ಈ ಮನುಕುಲ  ಸಾದನೆಯ ಹಾದಿಯಲ್ಲಿ ನಡೆದೀತು ಇಲ್ಲದಿರೆ ವಿನಾಶದ ಅಂಚನ್ನು ಹೊಂದೀತು.  ನನ್ನ ಮುಖವೀಕ್ಷಕರೇ ನಿಮಗೊಂದು ಕಿವಿಮಾತು  ನಾನಂತೂ ನನ್ನ ಬುರುಡೆಗೆ ತೂರಿದ್ದೆಲ್ಲವನ್ನೂ ತೋರುತ್ತೇನೆ. ನವು ಹೇಗೆ ಕಿವಿಹಿಂಡುವಿರೋ ಹಾಗೆ ನಾನು. ಮುತ್ತನ್ನು ಎತ್ತುವಿರೋ ತಿಮಿಂಗಲದ ಬಾಯಾಹಾರವಾಗಿವಿರೋ ನೀವೇ ತೀರ್ಮಾನಿಸಿ. ಮುಂದುವರಿದ ವಿeನದ ಇತರ ಆವಿಷ್ಕಾರಗಳನ್ನು ಪ್ರಾಜ್ಞರು ಮನುಕುಲದ ಉದ್ದಾರಕ್ಕೆ ಬಳಸಿದಂತೆ ಭರತಮುನಿಯ ದೃಶ್ಯಕಾವ್ಯೋಪಾದಿಯಲ್ಲಿಧರೆಗಿಳಿದ ನನ್ನನ್ನು  ಮಾನವನ ಹಿತಕಾರಕನಾಗಿ ಉಳಿಸಿಕೊಳ್ಳಿರೆಂಬ ಅರಿಕೆಯೊಂದಿಗೆ

ತಮ್ಮ ಮನೆಯ ಮಧ್ಯಸ್ಥ

ದೂ.ದ. ಪೆಟ್ಟಿಗೆ.

No comments: