Thursday, December 4, 2008

ಹೊಕ್ಕಳು ಬಳ್ಳಿ ಹೂತ ಜಾಗವ ನೆನೆದು..


ಭೂ ದೇವಿಯ ಹರಿದ್ವರ್ಣ ಮುಕುಟದ ಸಹ್ಯಾಚಲದುತ್ತುಂಗಗಳಲಿ, ನೋಟ ನೆಡುವ ತನಕವೂ ಪಸರಿಸಿಹ ಸಿಂಧುಸಾಗರದ ದಿಗಂತದಲ್ಲಿ, ನೊರವಾಲನುಕ್ಕಿ ಅಂಬಿಗರ ಕುಟೀರಕೆರಚುವ ವೀಚಿಕುಸುಮಗಳಲಿ, ಕಲ್ಲನೂ ಕರಗಿಸಬಲ್ಲೆನೆಂಬ ದಿನಮಣಿಯ ಚಂಡರಶ್ಮಿಗಳಲಿ ಕರುನಾಡಿನ ಕಡಲತೀರದಳೆಗೋಲೆನಿಪ ಉಗಿಬಂಡಿಯ ಜೋಡಿಕಂಬಿಗಳಲಿ, ನೆಲಕನ್ನೆಯ ಹಬ್ಬದುಡುಗೆಯೋಲ್ ಕಂಗೊಳಿಪ ಕಾರ್‍ಗದ್ದೆಯ ಪಚ್ಚೆಹಸಿರಿನಲಿ, ಹೊಲದ ತೋರಣದಂತೆ ಇತ್ತಿಂದತ್ತ ಹಾರುವ ಬೆಳ್ಳಿಕ್ಕಿ ಬಳಗದಲಿ, ತೋಡಿನಂಚಿನ ಮಾಮರದ ಕೆಂದಳಿರ ಕಂಡು ಕುಕಿಲಿಡುವ ಕೋಗಿಲೆಗಳಲಿ, ಫಲಿತ ಕದಳಿಯ ಕಡೆಗೆರಗಲು ತವಕಿಸಿ ಬೇಣದ ಅರಳಿಮರದಲಿ ಘೇಂಕರಿಸುವ ಕೋಡಗನ ಹಿಂಡಿನಲಿ, ಅಡಿಕೆ ತೋಟದ ತುಂತುರು ನೀರ ಹನಿಯೊಡನೆ ರಮಿಸಿ ಮನೆಯ ಮುಖವ ತೀಡುವ ತಂಬೆಲರಿನಲಿ, ಮಮತೆಯಲಿ ಎಳೆಗರುವಿಗುಣಿಸಲು ಗುಡ್ಡದಿಂದ ಮುಂಚೆಯೇ ದೊಡ್ಡಿಗೋಡಿಬಂದ ಆಕಳಂಬಾ ಕರೆಗಳಲಿ, ಅಡಿಕೆ ಚಪ್ಪರದಿ ಒಣಗುತಿಹ ಉಪ್ಪುಬೆರೆತ ಹುಣೆಸೆ ಹಣ್ಣಿನುಂಡೆಯ ಸೊಗಡಿನಲಿ, ಅಂಗಳದಿ ಬಿಸಿಲಿಗೆ ಚೆಲ್ಲಿದ ಪುನರ್ಪುಳಿ ಸಿಪ್ಪೆಯ ಸುಗಂಧದಲಿ, ದುಂಬಿಗಳ ಅಣಕಿಸುವ ನೀರೆತ್ತುವಿಂಜಿನ್ನುಗಳ ಝೇಂಕಾರದಲಿ, ಎಳೆಗಂದನನು ಸರಿಹೊತ್ತಿಗೆ ಮಲಗಿಸಲು, ಅತ್ತೆಯಲ್ಲಿಯ ಮುನುಸಿನಲ್ಲೂ ತಾಯಂದಿರು ಗುನು ಗುನಿಸುವ ಸೋಬಾನೆಯಲಿ, ಮುಸ್ಸಂಜೆಯಲಿ ಹಿತ್ತಲಕಲಡೆಯ ಒಂಟಿ ತೆಂಗಿನ ಹಾರೆ ಮರದಲ್ಲಿ ಕುಳಿತ ಗುಮ್ಮಕ್ಕಿಯ ಗೂಂಕಾರದಲಿ, ದೊಡ್ಡಪ್ಪ ಎಲ್ಲಿಂದಲೋ ಅರಸಿ ತಂದ ಅತಿವಿರಳವಾದ ಹೊಳೆಸಾಲಿನ ಅಪ್ಪೆ ಮಿಡಿಯ ಸೊನೆಯ ಸುರಭಿಯಲಿ, ಸಂಜೆಯ ಮನೆವಾರ್‍ತೆಯ ಅತ್ತೆಗೊಪ್ಪಿಸಿ ಕಿರಿತೆರೆಯ ಧಾರಾವಾಹಿಗೊಪ್ಪಿದ ಹೆಮ್ಮಕ್ಕಳ ಗಡಣದೊಡನೆ, ಮುಂದಿನ ವರ್ಷದ ಬೆಳೆಯ ಬೆಲೆನರಿಯದ ಅಡಿಕೆ ಮರಗಳ ಹೊಂಬಾಳೆಯೊಡೆದು ಪರಪರನೆ ಬಾಳೆಯೆಲೆಯಮೇಲೆ ಚೆಲ್ಲುವ ಸಿಂಗಾರಕ್ಕಿಯೊಡನೆ, ಕವುಚಿದ ಪಾತ್ರೆಯಲಿ ಪತಾಕೆಯಿಂದುದಿಸುವ ನಿರೂರಿಸುವ ತೊಡೆದೇವಿನ ಸವಿಗಂಪಿನೊಡನೆ, ಮೊಮ್ಮಗನಿಗೆ ಚೆನ್ನೆಮಣೆಯ ಕಲಿಸುವ ಅಮ್ಮಮ್ಮನ ಕವಳದಗೋರೆಯ ಬೊಚ್ಚು ಬಾಯಿಯೊಡನೆ, ದೆವ್ವದನುಭವ ಕಥೆನದೊಂದಿಗೆ ಹುರ್‍ಕೆಯಿಂದ ಮಕ್ಕಳ ಹೆದರಿಸುವ ಅಜ್ಜಂದಿರೊಡನೆ, ಬೀಜಕಳಚಲು ಸಂಗ್ರಹಿಸಿದ ಕೊಳೆತ ಗೇರು ಹಣ್ಣಿನ ಮದಿರೆಯ ಕಂಪಿನೊಡನೆ, ವಕಾರಿಸೇರಲು ಪೇರಿಸಿಟ್ಟ ಮೂಟೆಗಳ ಕೆಂಪಡಿಕೆಯ ತೊಗರಿನ ಘಾಟಿನೊಡನೆ, ಈ ವರ್ಷದಿ ಶುಭವಹಾರೈಸೆ, ಸಂಕ್ರಾಂತಿಪುರುಷನೊಡಗೊಂಡು, ಮಾರಸಾರಥಿ ಋತುರಾಜ ಕುಸುಮಾಕರನು ; ನಮ್ಮ ಹೊಕ್ಕಳುಬಳ್ಳಿಯ ಹೂತಲ್ಲಿ, ಹವಿಗನ್ನಡಿಗರ ಮೂಲನೆಲೆ ಸೆಲೆಯ ಮಲೆನಾಡು ಕರಾವಳಿಗಲ್ಲಿ,ಮೊದಲಡಿಯಿಡಿಸಿ, ಮುನ್ನುಡಿಬರೆದನು.
ಹೊಕ್ಕಳು ಬಳ್ಳಿ ಹೂತ ಜಾಗವ ನೆನೆದು ...ಶ್ರೀಕಾಂತ ಹೆಗಡೆ ಭೂ ದೇವಿಯ ಹರಿದ್ವರ್ಣ ಮುಕುಟದ ಸಹ್ಯಾಚಲದುತ್ತುಂಗಗಳಲಿ, ನೋಟ ನೆಡುವ ತನಕವೂ ಪಸರಿಸಿಹ ಸಿಂಧುಸಾಗರದ ದಿಗಂತದಲ್ಲಿ, ನೊರವಾಲನುಕ್ಕಿ ಅಂಬಿಗರ ಕುಟೀರಕೆರಚುವ ವೀಚಿಕುಸುಮಗಳಲಿ, ಕಲ್ಲನೂ ಕರಗಿಸಬಲ್ಲೆನೆಂಬ ದಿನಮಣಿಯ ಚಂಡರಶ್ಮಿಗಳಲಿ ಕರುನಾಡಿನ ಕಡಲತೀರದಳೆಗೋಲೆನಿಪ ಉಗಿಬಂಡಿಯ ಜೋಡಿಕಂಬಿಗಳಲಿ, ನೆಲಕನ್ನೆಯ ಹಬ್ಬದುಡುಗೆಯೋಲ್ ಕಂಗೊಳಿಪ ಕಾರ್‍ಗದ್ದೆಯ ಪಚ್ಚೆಹಸಿರಿನಲಿ, ಹೊಲದ ತೋರಣದಂತೆ ಇತ್ತಿಂದತ್ತ ಹಾರುವ ಬೆಳ್ಳಿಕ್ಕಿ ಬಳಗದಲಿ, ತೋಡಿನಂಚಿನ ಮಾಮರದ ಕೆಂದಳಿರ ಕಂಡು ಕುಕಿಲಿಡುವ ಕೋಗಿಲೆಗಳಲಿ, ಫಲಿತ ಕದಳಿಯ ಕಡೆಗೆರಗಲು ತವಕಿಸಿ ಬೇಣದ ಅರಳಿಮರದಲಿ ಘೇಂಕರಿಸುವ ಕೋಡಗನ ಹಿಂಡಿನಲಿ, ಅಡಿಕೆ ತೋಟದ ತುಂತುರು ನೀರ ಹನಿಯೊಡನೆ ರಮಿಸಿ ಮನೆಯ ಮುಖವ ತೀಡುವ ತಂಬೆಲರಿನಲಿ, ಮಮತೆಯಲಿ ಎಳೆಗರುವಿಗುಣಿಸಲು ಗುಡ್ಡದಿಂದ ಮುಂಚೆಯೇ ದೊಡ್ಡಿಗೋಡಿಬಂದ ಆಕಳಂಬಾ ಕರೆಗಳಲಿ, ಅಡಿಕೆ ಚಪ್ಪರದಿ ಒಣಗುತಿಹ ಉಪ್ಪುಬೆರೆತ ಹುಣೆಸೆ ಹಣ್ಣಿನುಂಡೆಯ ಸೊಗಡಿನಲಿ, ಅಂಗಳದಿ ಬಿಸಿಲಿಗೆ ಚೆಲ್ಲಿದ ಪುನರ್ಪುಳಿ ಸಿಪ್ಪೆಯ ಸುಗಂಧದಲಿ, ದುಂಬಿಗಳ ಅಣಕಿಸುವ ನೀರೆತ್ತುವಿಂಜಿನ್ನುಗಳ ಝೇಂಕಾರದಲಿ, ಎಳೆಗಂದನನು ಸರಿಹೊತ್ತಿಗೆ ಮಲಗಿಸಲು, ಅತ್ತೆಯಲ್ಲಿಯ ಮುನುಸಿನಲ್ಲೂ ತಾಯಂದಿರು ಗುನು ಗುನಿಸುವ ಸೋಬಾನೆಯಲಿ, ಮುಸ್ಸಂಜೆಯಲಿ ಹಿತ್ತಲಕಲಡೆಯ ಒಂಟಿ ತೆಂಗಿನ ಹಾರೆ ಮರದಲ್ಲಿ ಕುಳಿತ ಗುಮ್ಮಕ್ಕಿಯ ಗೂಂಕಾರದಲಿ, ದೊಡ್ಡಪ್ಪ ಎಲ್ಲಿಂದಲೋ ಅರಸಿ ತಂದ ಅತಿವಿರಳವಾದ ಹೊಳೆಸಾಲಿನ ಅಪ್ಪೆ ಮಿಡಿಯ ಸೊನೆಯ ಸುರಭಿಯಲಿ, ಸಂಜೆಯ ಮನೆವಾರ್‍ತೆಯ ಅತ್ತೆಗೊಪ್ಪಿಸಿ ಕಿರಿತೆರೆಯ ಧಾರಾವಾಹಿಗೊಪ್ಪಿದ ಹೆಮ್ಮಕ್ಕಳ ಗಡಣದೊಡನೆ, ಮುಂದಿನ ವರ್ಷದ ಬೆಳೆಯ ಬೆಲೆನರಿಯದ ಅಡಿಕೆ ಮರಗಳ ಹೊಂಬಾಳೆಯೊಡೆದು ಪರಪರನೆ ಬಾಳೆಯೆಲೆಯಮೇಲೆ ಚೆಲ್ಲುವ ಸಿಂಗಾರಕ್ಕಿಯೊಡನೆ, ಕವುಚಿದ ಪಾತ್ರೆಯಲಿ ಪತಾಕೆಯಿಂದುದಿಸುವ ನಿರೂರಿಸುವ ತೊಡೆದೇವಿನ ಸವಿಗಂಪಿನೊಡನೆ, ಮೊಮ್ಮಗನಿಗೆ ಚೆನ್ನೆಮಣೆಯ ಕಲಿಸುವ ಅಮ್ಮಮ್ಮನ ಕವಳದಗೋರೆಯ ಬೊಚ್ಚು ಬಾಯಿಯೊಡನೆ, ದೆವ್ವದನುಭವ ಕಥೆನದೊಂದಿಗೆ ಹುರ್‍ಕೆಯಿಂದ ಮಕ್ಕಳ ಹೆದರಿಸುವ ಅಜ್ಜಂದಿರೊಡನೆ, ಬೀಜಕಳಚಲು ಸಂಗ್ರಹಿಸಿದ ಕೊಳೆತ ಗೇರು ಹಣ್ಣಿನ ಮದಿರೆಯ ಕಂಪಿನೊಡನೆ, ವಕಾರಿಸೇರಲು ಪೇರಿಸಿಟ್ಟ ಮೂಟೆಗಳ ಕೆಂಪಡಿಕೆಯ ತೊಗರಿನ ಘಾಟಿನೊಡನೆ, ಈ ವರ್ಷದಿ ಶುಭವಹಾರೈಸೆ, ಸಂಕ್ರಾಂತಿಪುರುಷನೊಡಗೊಂಡು, ಮಾರಸಾರಥಿ ಋತುರಾಜ ಕುಸುಮಾಕರನು ; ನಮ್ಮ ಹೊಕ್ಕಳುಬಳ್ಳಿಯ ಹೂತಲ್ಲಿ, ಹವಿಗನ್ನಡಿಗರ ಮೂಲನೆಲೆ ಸೆಲೆಯ ಮಲೆನಾಡು ಕರಾವಳಿಗಲ್ಲಿ,ಮೊದಲಡಿಯಿಡಿಸಿ, ಮುನ್ನುಡಿಬರೆದನು.